SSC CGL ನೇಮಕಾತಿ 2025: 14,582 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ! Central Govt Jobs 2025

ಸಿಬ್ಬಂದಿ ಆಯ್ಕೆ ಆಯೋಗ (SSC) ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (CGL) ಪರೀಕ್ಷೆ 2025 ಕ್ಕಾಗಿ ಅಗತ್ಯ ಮಾಹಿತಿ  ಪ್ರಕಟಿಸಿದೆ.  ಒಟ್ಟು 14,582 CGL ಹುದ್ದೆಗಳ ಭರ್ತಿಗೆ ಆಸಕ್ತ ಮತ್ತು ಸಾಮರ್ಥ್ಯವುಳ್ಳ ಅರ್ಜಿದಾರರಿಂದ ಅರ್ಜಿಗಳನ್ನು ಕರೆಯಲಾಗಿದೆ.
ಈ ನೇಮಕಾತಿಯ ಆಯ್ಕೆಯು ಯಾವುದೇ ಪದವಿ ಅಥವಾ 12ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಒಳ್ಳೆಯ ಅವಕಾಶವಾಗಿದೆ.  ಆನ್‌ಲೈನ್ ಅರ್ಜಿ ಕ್ರಿಯೆಯು ಜೂನ್ 09,  2025 ರಂದು ಪ್ರಾರಂಭವಾಗಿದ್ದು,  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 04, 2025  ರವರೆಗೂ ಇರುತ್ತದೆ.  ಒಂದು ವೇಳೆ ನಿಮ್ಮ ಅರ್ಜಿಯಲ್ಲಿ ಏನಾದರೂ ತಿದ್ದುಪಡಿಗಳಿದ್ದರೆ,  ಜುಲೈ 09, 2025 ರಿಂದ ಜುಲೈ 10, 2025 ರೊಳಗೆ ಆನ್‌ಲೈನ್‌ನಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದು.  ಅರ್ಹ ಅಭ್ಯರ್ಥಿಗಳು SSC ಯ ಅಧಿಕೃತ ವೆಬ್‌ಸೈಟ್ ಆದಂತಹ ssc.gov.in  ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.  ಈ ಉತ್ತಮ ಅವಕಾಶವನ್ನು ಉಪಯೋಗಿಸಿಕೊಂಡು ಕೇಂದ್ರ ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲಿ ಉದ್ಯೋಗ ಪಡೆಯುವಂತಹ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ.

 

SSC CGL ನೇಮಕಾತಿ 2025 ರ ನೇಮಕಾತಿಗೆ ಅರ್ಜಿ ಸಲ್ಲಿಸಲು, ಸಾಮಾನ್ಯ ಮತ್ತು OBC ಅರ್ಜಿದಾರರು 100 ರೂ  ಅರ್ಜಿ ಶುಲ್ಕ ಕಟ್ಟಬೇಕಾಗುತ್ತದೆ.  ಆದರೆ, SC, ST, PH ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ತೆರೆನಾದ ಅರ್ಜಿ ಶುಲ್ಕ ಇರುವುದಿಲ್ಲ.  ಟೈಯರ್ I ಪ್ರವೇಶ ಪತ್ರಗಳು ಆಗಸ್ಟ್ 2025 ರಲ್ಲಿ ಲಭ್ಯವಿರುತ್ತವೆ ಮತ್ತು ಟೈಯರ್ I ಪರೀಕ್ಷೆಯು ಆಗಸ್ಟ್ 13 ರಿಂದ 30, 2025 ರ ನಡುವೆ ನಡೆಯಲಿದೆ.

 

SSC ನೇಮಕಾತಿಗೆ ಅರ್ಜಿ ಸಲ್ಲಿಸಲು, ವಯಸ್ಸಿನ ಮಿತಿ (ಆಗಸ್ಟ್ 01, 2025 ರಂತೆ) ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 30 ವರ್ಷಗಳು ಆಗಿರಬೇಕು. ಅಲ್ಲದೆ ಇವು ಗಳು ಕೆಲವು ನಿರ್ದಿಷ್ಟ ಹುದ್ದೆಗಳ ಆಧಾರದ ಮೇಲೆ ವಯಸ್ಸಿನ ಮಿತಿಗಳಲ್ಲಿ ಕೆಲವು ಭಿನ್ನತೆಗಳು ಇವೆ, ಹಾಗಾಗಿ ನಿಮ್ಮ ಹುದ್ದೆಗೆ ಅನ್ವಯವಾಗುವ ವಯಸ್ಸಿನ ಮಿತಿಯನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

 

ಜೂನಿಯರ್ ಸ್ಟ್ಯಾಟಿಸ್ಟಿಕಲ್ ಆಫೀಸರ್ ಹುದ್ದೆಗೆ, ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ 12ನೇ ತರಗತಿಯಲ್ಲಿ ಗಣಿತದಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು,  ಅಥವಾ ಪದವಿ ಮಟ್ಟದಲ್ಲಿ ಅಂಕಿಅಂಶಗಳನ್ನು ಒಂದು ವಿಷಯವನ್ನಾಗಿಟ್ಟುಕೊಂಡು ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಹಾಗೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ.  ಇದಲ್ಲದೆ ಆಯಾ ಹುದ್ದೆಗಳಿಗನುಗುಣವಾಗಿ ಯಾವ ಶೈಕ್ಷಣಿಕ ಪದವಿ ಹೊಂದಿರಬೇಕು ಎಂಬುದನ್ನು ಅಧಿಕೃತ ವೆಬ್ ಸೈಟನಲ್ಲಿ ಖಚಿತಪಡಿಸಿಕೊಳ್ಳಿ.

 

ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಅರ್ಜಿ ಹಾಕಲು, ದಯವಿಟ್ಟು SSC ವೆಬ್‌ಸೈಟ್‌ಗೆ ಭೇಟಿ ನೀಡಿ.

 

SSC CGL ನೇಮಕಾತಿಯಾ ಕೆಲವು FAQ ಗಳು:
SSC CGL ನೇಮಕಾತಿ 2025 ಯಲ್ಲಿ ಕರೆಯಾಲಾಗಿರುವ ಒಟ್ಟು ಹುದ್ದೆಗಳು ಎಷ್ಟು?
– 14,582 ಹುದ್ದೆಗಳು

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
– ಜುಲೈ 04 / 2025

ಪರೀಕ್ಷೆ ಬರೆಯಲು ಅರ್ಜಿ ಶುಲ್ಕ ಎಷ್ಟು ಇರುತ್ತದೆ?
– ₹100 ರೂಪಾಯಿ

SSC CGL ನೇಮಕಾತಿ 2025 ಯಲ್ಲಿ ಇರಬೇಕಾದ ಕನಿಷ್ಠ ವಯಸ್ಸು ಎಷ್ಟು?
18 ವರ್ಷ

SSC CGL ನೇಮಕಾತಿ 2025 ಯಲ್ಲಿ ಇರಬೇಕಾದ ಗರಿಷ್ಠ ವಯಸ್ಸು ಎಷ್ಟು?
30 ವರ್ಷ

 

ನೀವೇನಾದರೂ ಬೆಂಗಳೂರು ಅಥಾ ಕರ್ನಾಟಕ ರಾಜ್ಯದ ಇನ್ನಿತರ ನಗರಗಳಲ್ಲಿ ಕೆಲಸ ಹುಡುಕುತ್ತಿದ್ದರೆ ಈ ವೆಬ್ಸೈಟ್ ನಿಮಗೆ ಸಹಾಯ ಮಾಡುತ್ತದೆ, ಹಾಗೂ ಇದರಲ್ಲಿ ರಿಜಿಸ್ಟರ್ ಆಗುವ ಮೂಲಕ ನಿಮ್ಮಿಷ್ಟದ ಉದ್ಯೋಗ ಪಡೆದುಕೊಳ್ಳಬಹುದು. www.Kelasaa.in

    Leave A Comment

    Top