General Knowledge

ಗೋಲ್ ಗುಂಬಜ್

ಗೋಲ್ ಗುಂಬಜ್

   ಈ ರಚನೆಯು ಆದಿಲ್ ಶಾಹಿ ವಾಸ್ತುಶಿಲ್ಪದ ಪ್ರಮುಖ ಉದಾಹರಣೆ.   ಭಾರತದ ಕರ್ನಾಟಕದಲ್ಲಿರುವ ವಿಜಯಪುರದಲ್ಲಿದೆ . ಇದು ಆದಿಲ್ ಶಾಹಿ ರಾಜವಂಶದ ಏಳನೇ ಸುಲ್ತಾನ ಮೊಹಮ್ಮದ್ ಆದಿಲ್ ಶಾ ಮತ್ತು ಅವರ ಕೆಲವು ಸಂಬಂಧಿಕರ ಅವಶೇಷಗಳನ್ನು ಹೊಂದಿದೆ . 17 ನೇ ಶತಮಾನದ ಸಮಾಧಿಯಾಗಿದ್ದು, ಅದರ ಪ್ರಮಾಣ ಮತ್ತು ಅಸಾಧಾರಣವಾದ ದೊಡ್ಡ ಗುಮ್ಮಟಕ್ಕೆ ಹೆಸರುವಾಸಿಯಾಗಿದೆ.  ಆದಿಲ್ ಶಾಹಿ ರಾಜವಂಶದವರು ನಿರ್ಮಿಸಿದ ಅತ್ಯಂತ ಮಹತ್ವಾಕಾಂಕ್ಷೆಯ ರಚನೆಗಳಲ್ಲಿ ಇದು ಒಂದು.  

ವಿಶ್ವದ ಎರಡನೇ ಅತಿದೊಡ್ಡ ಮತ್ತು ಭಾರತದ ಅತಿದೊಡ್ಡ  ಗುಮ್ಮಟವಾಗಿದೆ.  ಇದು ಆಡಳಿತಗಾರ 2  ನೇ  ಇಬ್ರಾಹಿಂ ಆದಿಲ್ ಷಾ ರ ಸಮಾಧಿಯಾಗಿದೆ .  ಇದು  ಆದಿಲ್ ಶಾಹಿ ರಾಜವಂಶದ ವೈಭವವನ್ನು ಪ್ರತಿಪಾದಿಸುವ ಪ್ರಯತ್ನವಾಗಿದೆ ಎಂದು ಹೇಳುತ್ತಾರೆ.ಸ್ಮಾರಕದ ಭವ್ಯ ಸ್ವರೂಪದ ಜೊತೆಗೆ  ಗುಮ್ಮಟದ ಅಷ್ಟಭುಜಾಕೃತಿಯ ಗೋಪುರಗಳಿದ್ದು , ಘನದ ನಾಲ್ಕು ಮೂಲೆಗಳಲ್ಲಿ  ಕಂಬದ ಹಾಗೆ ಸಾಲುಗಳಿವೆ ಮತ್ತು ಅವು ಒಳಗೆ ಮೆಟ್ಟಿಲುಗಳನ್ನು ಹೊಂದಿವೆ. ಡೆಕ್ಕನ್ ಇಂಡೋ- ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಯಲ್ಲಿರುವ ಈ ಬ್ರಹತ್ ರಚನೆಯನ್ನು ಬೂದು ಬಸಾಲ್ಟ್ ಕಲ್ಲಿನಿಂದ ನಿರ್ಮಿಸಲಾಗಿದೆ. ಮುಖ್ಯದ್ವಾರದಲ್ಲಿ ಒಂದು ಕಲ್ಲು ನೇತಾಡುವುದನ್ನ ನೀವು ಗಮನಿಸಬಹುದು, ಅದನ್ನು ಬಿಜ್ಲಿ ಪತ್ತರ್ ಎನ್ನುತ್ತಾರೆ. ಇದು ಸುಲ್ತಾನ ನ ಆಳ್ವಿಕೆಯಲ್ಲಿ ಭೂಮಿ ಮೇಲೆ ಬಿದ್ದಂತಹ ಉಲ್ಕಾ ಶಿಲೆಯ ತುಂಡಾಗಿದೆ. ಒಳಭಾಗವು ಸುಮಾರು 41 ಮೀ ಅಡ್ಡಲಾಗಿ ಮತ್ತು 60 ಮೀ ಎತ್ತರವಿರುವ ದೊಡ್ಡ ಏಕ ಕೋಣೆಯಾಗಿದ್ದು, ಮಧ್ಯದಲ್ಲಿ ಮೊಹಮ್ಮದ್ ಆದಿಲ್ ಷಾ, ಅವರ ಕಿರಿಯ ಪತ್ನಿ, ಹಿರಿಯ ಪತ್ನಿ, ಮತ್ತು  ನೆಚ್ಚಿನ ಪ್ರೇಯಸಿ ರಂಬಾ,  ಮಗಳು ಮತ್ತು ಮೊಮ್ಮಗನ ಸಮಾಧಿಗಳನ್ನು ಹೊಂದಿರುವ ಎತ್ತರದ ವೇದಿಕೆಯಿದೆ.  ಗುಮ್ಮಟದ ತಳದ ಸುತ್ತಲೂ ಗ್ಯಾಲರಿ ಇದೆ, ಗುಮ್ಮಟದಿಂದ ಪ್ರತಿಬಿಂಬಿಸುವ ಶಬ್ದದಿಂದಾಗಿ ಇಲ್ಲಿಂದ ಮಸುಕಾದ ಶಬ್ದವು ಗುಮ್ಮಟದಾದ್ಯಂತ ಕೇಳುವುದರಿಂದ ಇದನ್ನು 'ಪಿಸುಗುಟ್ಟುವ ಗ್ಯಾಲರಿ' ಎಂದು ಕರೆಯಲಾಗುತ್ತದೆ.  ೪೦೦ ವರ್ಷಗಳ ಇತಿಹಾಸ ಹೊಂದಿರುವ ಗೋಲ ಗುಮ್ಮಟ  ಭಾರತದ ಅತಿದೊಡ್ಡ ಸಮಾಧಿಯಾಗಿದೆ. 

You need to add questions

Your score is

The average score is 0%

0%

ಸಂತ ಶಿಶುನಾಳ ಶರೀಫ

ಸಂತ ಶಿಶುನಾಳ ಶರೀಫ

ಸಂತ ಶಿಶುನಾಳ ಶರೀಫರು ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ ತತ್ವಪದಗಳ ಮೂಲಕ ಸಮಾಜ ಸುಧಾರಣೆ ಮಾಡಿದ  ಸಂತ ಶಿಶುನಾಳ ಶರೀಫರು ಒಬ್ಬ  ಭಾರತೀಯ ಸಮಾಜ ಸುಧಾರಕ, ತತ್ವಜ್ಞಾನಿ ಮತ್ತು ಕವಿ. 7 ಮಾರ್ಚ್ 1819 ರಂದು ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿರುವ ಶಿಗ್ಗಾಂವಿ ತಾಲ್ಲೂಕಿನ ಶಿಶುವಿನಹಾಳ ಎಂಬ ಗ್ರಾಮದಲ್ಲಿ ಜನಿಸಿದರು. ಮುಲ್ಕಿ ಪರೀಕ್ಷೆ ಪಾಸು ಮಾಡಿದ ಬಳಿಕ ಶರೀಫರು ಕೆಲ ಕಾಲ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು, ನಂತರ ಶರೀಫರಿಗೆ ಕಳಸದ ಗುರು ಗೋವಿಂದಭಟ್ಟರಿಂದ ಅನುಗ್ರಹವಾಯಿತು. ಬ್ರಾಹ್ಮಣರಾದ ಗೋವಿಂದ ಭಟ್ಟರು ಈ ಪ್ರದೇಶದಲ್ಲಿ ಅಸಾಂಪ್ರದಾಯಿಕ ಮೇಷ್ಟ್ರಾಗಿ ಪ್ರಸಿದ್ಧರಾಗಿದ್ದರು. ಯಾವುದೇ ಮತದ  ಬಗ್ಗೆ ಮೂಡನಂಬಿಕೆ ಇಲ್ಲದ ಈ ಗುರುಗಳು ಶರೀಫರಿಗೆ ತುಂಬಾ ಮೆಚ್ಚುಗೆಯಾದರು.ಶರೀಫರು ಹಾಡಿದ ಪದಗಳು ಧಾರವಾಡ ಜಿಲ್ಲೆಯ ಆಡುಭಾಷೆಯ ಶೈಲಿಯಲ್ಲಿವೆ. ಈ ಪದಗಳಲ್ಲಿ ಕೆಲವು ದೇವತಾಸ್ತುತಿಯ ಪದಗಳಾದರೆ, ಇನ್ನು ಕೆಲವು ಪದಗಳು ತತ್ವಬೋಧನೆಯ ಪದಗಳಾಗಿವೆ. ಹೆಚ್ಚಿನ ಪದಗಳು ಕನ್ನಡದಲ್ಲಿ ಇದ್ದರೂ ಸಹ ಕೆಲವು ಪದಗಳು ಉರ್ದು ಭಾಷೆಯಲ್ಲಿವೆ. ಚಾಮರಸನ ‘ಪ್ರಭುಲಿಂಗಲೀಲೆ’ ಅವರ ಮೇಲೆ ಬಹಳ ಪ್ರಭಾವವನ್ನು ಉಂಟುಮಾಡಿದ ಕೃತಿಯಾಗಿದೆ.  ಭಕ್ತಿಯಿಂದ ಜ್ಞಾನ, ಜ್ಞಾನದಿಂದ ವಿರಕ್ತಿ, ವಿರಕ್ತಿಯಿಂದ ಮುಕ್ತಿ- ಎಂದು ಸಾರಿದ್ದಾರೆ. ಅವರು ತಮ್ಮ ಹಾಡುಗಳಿಗೆ ‘ಶಿಶುನಾಳಧೀಶ’ ಎಂಬ ಅಂಕಿತವನ್ನು ನೀಡಿದ್ದಾರೆ.   ಲೋಕದ ಕಾಳಜಿ, ಗುಡಿಯ ನೋಡಿರಣ್ಣ , ಅಳಬೇಡ ತಂಗಿ ಅಳಬೇಡ, ಕೋಡಗನ ಕೋಳಿ ನುಂಗಿತ್ತಾ  ತರವಲ್ಲ ತಗಿ ನಿನ್ನ ತಂಬೂರಿ ಸ್ವರ  ಸೇರಿದಂತೆ ಇನ್ನು ಹಲವಾರು ಪ್ರಖ್ಯಾತ ಜನಪ್ರಿಯ  ತತ್ವಪದಗಳನ್ನು ರಚಿಸಿದ್ದಾರೆ. 70 ವರ್ಷಗಳ ಕಾಲ ಬದುಕಿ ಹುಟ್ಟಿದ ದಿನದಂದೇ (1889 March 7) ಎಲ್ಲರಿಗೂ ಹೇಳಿ ಕೇಳಿ, ಬಿಡತೇನಿ ದೇಹ ಬಿಡತೇನಿ ಎಂದು ಹಾಡುತ್ತ ವಿದೇಹ ಕೈವಲ್ಯವನ್ನು ಪಡೆದು ಶಿಶುನಾಳಧೀಶನಲ್ಲಿ ಒಂದಾದರು.   ಹೀಗೆ  ಉತ್ತರಕರ್ನಾಟಕವು ಅನೇಕ ಸಂತರನ್ನು ಪಡೆದ ಪುಣ್ಯಕ್ಷೇತ್ರ. ಹುಬ್ಬಳ್ಳಿಯ ಸಿದ್ಧಾರೂಢರು, ನವಲಗುಂದದ ನಾಗಲಿಂಗಜ್ಜ, ಅಥಣಿಯ ಮುರುಘೇಂದ್ರರು, ಅಗಡಿ ಶೇಷಾಚಲಸ್ವಾಮಿಗಳು, ತಿಂಥಿಣಿ ಮೋನೇಶ್ವರರು, ಕಡಕೋಳ ಮಡಿವಾಳಪ್ಪ ಮುಂತಾದವರು ಜನಮಾನಸದಲ್ಲಿ ಬೆರೆತು ಹೋಗಿದ್ದಾರೆ. ಜಾತಿ, ಧರ್ಮಗಳನ್ನು ಬದಿಗೊತ್ತಿ ಸಹೋದರತ್ವ ವನ್ನು ಎತ್ತಿ ಹಿಡಿದಿದ್ದಾರೆ. ಅಲ್ಲಮಪ್ರಭು ಹೇಳಿದ ‘ತನ್ನ ತಾನರಿದಡೆ ತನ್ನರಿವೆ ಗುರು’ ಎಂಬ ಮಹಾಸೂತ್ರವನ್ನು ಇಲ್ಲಿಯ ನೂರಾರು ಸಂತರು ಬಿಡದೆ ಪಾಲಿಸಿದ್ದಾರೆ.

1 / 1

ಸಂತ ಶಿಶುನಾಳ ಶರೀಫರು ಎಲ್ಲಿ ಜನಿಸಿದರು?

Your score is

The average score is 100%

0%

    Leave A Comment

    Top