ಗೋಲ್ ಗುಂಬಜ್
ಈ ರಚನೆಯು ಆದಿಲ್ ಶಾಹಿ ವಾಸ್ತುಶಿಲ್ಪದ ಪ್ರಮುಖ ಉದಾಹರಣೆ. ಭಾರತದ ಕರ್ನಾಟಕದಲ್ಲಿರುವ ವಿಜಯಪುರದಲ್ಲಿದೆ . ಇದು ಆದಿಲ್ ಶಾಹಿ ರಾಜವಂಶದ ಏಳನೇ ಸುಲ್ತಾನ ಮೊಹಮ್ಮದ್ ಆದಿಲ್ ಶಾ ಮತ್ತು ಅವರ ಕೆಲವು ಸಂಬಂಧಿಕರ ಅವಶೇಷಗಳನ್ನು ಹೊಂದಿದೆ . 17 ನೇ ಶತಮಾನದ ಸಮಾಧಿಯಾಗಿದ್ದು, ಅದರ ಪ್ರಮಾಣ ಮತ್ತು ಅಸಾಧಾರಣವಾದ ದೊಡ್ಡ ಗುಮ್ಮಟಕ್ಕೆ ಹೆಸರುವಾಸಿಯಾಗಿದೆ. ಆದಿಲ್ ಶಾಹಿ ರಾಜವಂಶದವರು ನಿರ್ಮಿಸಿದ ಅತ್ಯಂತ ಮಹತ್ವಾಕಾಂಕ್ಷೆಯ ರಚನೆಗಳಲ್ಲಿ ಇದು ಒಂದು.
ವಿಶ್ವದ ಎರಡನೇ ಅತಿದೊಡ್ಡ ಮತ್ತು ಭಾರತದ ಅತಿದೊಡ್ಡ ಗುಮ್ಮಟವಾಗಿದೆ. ಇದು ಆಡಳಿತಗಾರ 2 ನೇ ಇಬ್ರಾಹಿಂ ಆದಿಲ್ ಷಾ ರ ಸಮಾಧಿಯಾಗಿದೆ . ಇದು ಆದಿಲ್ ಶಾಹಿ ರಾಜವಂಶದ ವೈಭವವನ್ನು ಪ್ರತಿಪಾದಿಸುವ ಪ್ರಯತ್ನವಾಗಿದೆ ಎಂದು ಹೇಳುತ್ತಾರೆ.ಸ್ಮಾರಕದ ಭವ್ಯ ಸ್ವರೂಪದ ಜೊತೆಗೆ ಗುಮ್ಮಟದ ಅಷ್ಟಭುಜಾಕೃತಿಯ ಗೋಪುರಗಳಿದ್ದು , ಘನದ ನಾಲ್ಕು ಮೂಲೆಗಳಲ್ಲಿ ಕಂಬದ ಹಾಗೆ ಸಾಲುಗಳಿವೆ ಮತ್ತು ಅವು ಒಳಗೆ ಮೆಟ್ಟಿಲುಗಳನ್ನು ಹೊಂದಿವೆ. ಡೆಕ್ಕನ್ ಇಂಡೋ- ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಯಲ್ಲಿರುವ ಈ ಬ್ರಹತ್ ರಚನೆಯನ್ನು ಬೂದು ಬಸಾಲ್ಟ್ ಕಲ್ಲಿನಿಂದ ನಿರ್ಮಿಸಲಾಗಿದೆ. ಮುಖ್ಯದ್ವಾರದಲ್ಲಿ ಒಂದು ಕಲ್ಲು ನೇತಾಡುವುದನ್ನ ನೀವು ಗಮನಿಸಬಹುದು, ಅದನ್ನು ಬಿಜ್ಲಿ ಪತ್ತರ್ ಎನ್ನುತ್ತಾರೆ. ಇದು ಸುಲ್ತಾನ ನ ಆಳ್ವಿಕೆಯಲ್ಲಿ ಭೂಮಿ ಮೇಲೆ ಬಿದ್ದಂತಹ ಉಲ್ಕಾ ಶಿಲೆಯ ತುಂಡಾಗಿದೆ. ಒಳಭಾಗವು ಸುಮಾರು 41 ಮೀ ಅಡ್ಡಲಾಗಿ ಮತ್ತು 60 ಮೀ ಎತ್ತರವಿರುವ ದೊಡ್ಡ ಏಕ ಕೋಣೆಯಾಗಿದ್ದು, ಮಧ್ಯದಲ್ಲಿ ಮೊಹಮ್ಮದ್ ಆದಿಲ್ ಷಾ, ಅವರ ಕಿರಿಯ ಪತ್ನಿ, ಹಿರಿಯ ಪತ್ನಿ, ಮತ್ತು ನೆಚ್ಚಿನ ಪ್ರೇಯಸಿ ರಂಬಾ, ಮಗಳು ಮತ್ತು ಮೊಮ್ಮಗನ ಸಮಾಧಿಗಳನ್ನು ಹೊಂದಿರುವ ಎತ್ತರದ ವೇದಿಕೆಯಿದೆ. ಗುಮ್ಮಟದ ತಳದ ಸುತ್ತಲೂ ಗ್ಯಾಲರಿ ಇದೆ, ಗುಮ್ಮಟದಿಂದ ಪ್ರತಿಬಿಂಬಿಸುವ ಶಬ್ದದಿಂದಾಗಿ ಇಲ್ಲಿಂದ ಮಸುಕಾದ ಶಬ್ದವು ಗುಮ್ಮಟದಾದ್ಯಂತ ಕೇಳುವುದರಿಂದ ಇದನ್ನು 'ಪಿಸುಗುಟ್ಟುವ ಗ್ಯಾಲರಿ' ಎಂದು ಕರೆಯಲಾಗುತ್ತದೆ. ೪೦೦ ವರ್ಷಗಳ ಇತಿಹಾಸ ಹೊಂದಿರುವ ಗೋಲ ಗುಮ್ಮಟ ಭಾರತದ ಅತಿದೊಡ್ಡ ಸಮಾಧಿಯಾಗಿದೆ.
You need to add questions